ಹವ್ಯಕ ವಧುಗಳ ಕೊರತೆಯ ಬಗ್ಗೆ ನಿನ್ನೆ ಓದಿದ ಲೇಖನದ ಕುರಿತು ನನ್ನ ಅಭಿಪ್ರಾಯ :
"ಮನೆಯಲ್ಲಿರುವ" ಹುಡುಗರ ಬಗ್ಗೆ:
ಓದಿನಲ್ಲಿ ಬುದ್ಧಿವಂತರು, ಕಲೆ, ಸಾಹಿತ್ಯ, ಮತ್ತಿನ್ಯಾವುದರಲ್ಲಾದರೂ ಆಸಕ್ತಿ ಇರುವವರು, ಸ್ವಲ್ಪ ಮಟ್ಟಿಗೆ ದುಡ್ಡು, ಹೆಸರು ಮಾಡಬೇಕೆಂದಿರುವವರು ಪೇಟೆ ಸೇರಿಕೊಂಡಿರುತ್ತಾರೆ..
ಮನೆಯಲ್ಲಿರುವ ಯುವಕರು, ಪಿತ್ರಾರ್ಜಿತವಾಗಿ ಬಂದ ಅಡಿಕೆ ತೋಟ ನೋಡಿಕೊಂಡು ಹಳ್ಳಿ ಕಡೆ - ಹರಟೆ ಹೊಡೆಯುತ್ತ, ಗುಠಕಾ ಜಗಿಯುತ್ತಾ, ಆಗಹೋಗದ ರಾಜಕೀಯವೋ, ಗಾಸಿಪ್ಪೋ ಮಾಡುತ್ತ ಕಾಲಹರಣ ಮಾಡುವವರೇ ಹೆಚ್ಚು. ಇಂಥವರಿಗೆ, ನೀವು ನಿಮ್ಮ ಮಗಳನ್ನು ಕೊಟ್ಟೀರ?
ನಾವು ಹುಡುಗಿಯರೂ ಸುತ್ತ ಮುತ್ತ ಇಂಥವರನ್ನು ನೋಡಿರುತ್ತೇವೆ. ನಮ್ಮನ್ನು ಬೇರೆ ಒಳ್ಳೆಯ ಅವಕಾಶಗಳು ಇರುವಾಗ, ಬರೀ ಹವ್ಯಕರಲ್ಲ ಎಂದು ಬಿಟ್ಟುಬಿಡುವುದು ಸರಿಯೇ? ಅಷ್ಟಕ್ಕೂ, ನನಗೆ ಗೊತ್ತಿರುವಂತೆ, "ಸಾಕಷ್ಟು ಓದಿರುವ, ಉತ್ತಮ ಉದ್ಯೋಗದಲ್ಲಿರುವ" ಯುವಕರಾರಿಗೂ ವಧು ಸಿಗದೇ ಹೋಗಿಲ್ಲ. ಹಾಗೇನಾದರು ಇದ್ದರೆ, ಅಂಥ ಯುವಕರೇ ಕೊಂಚ ಚೂಸಿಯಾಗಿರುತ್ತಾರೆ. ಹಾಗೂ, ಇಂಥ ಯುವಕರು ಚಟರ್ಜೀಗಳನ್ನ, ಪಟೇಲ್ ಗಳನ್ನ ಮದುವೆಯಾಗಿರುವ ಸಾಕಷ್ಟು ಉದಾಹರಣೆಗಳಿವೆ.
ಇನ್ನೊಂದು ಕಡೆ, ಇದೆಲ್ಲ ಬಿಟ್ಟು, ಹಳ್ಳಿ ಕಡೆ ಹುಡುಗರನ್ನು , ಹವ್ಯಕರೆಂದು ಮದುವೆಯಾದರೆ, ಸಿಗುವುದೇನು? ಮುಂದೆ ಓದಲಾಗುವುದಿಲ್ಲ, ನಮ್ಮ ಮಹತ್ವಾಕಂಕ್ಷೆಗಳಿಗೆ ಬೆಲೆ ಕಡಿಮೆ, talent ಗೆ ಬೆಲೆ ಇಲ್ಲವೇ ಇಲ್ಲ, ಬದುಕು ಹಳ್ಳಿಯ ಒಂದು ಮನೆಯ ಸುತ್ತ ಮಾತ್ರ ಗಿರಕಿ ಹೊಡೆಯುತ್ತದೆ, ದೇಶ ಸುತ್ತುವ, ಕೋಶ ಓದುವ ಅವಕಾಶಗಳೂ limited .
ಹೀಗಂತ ನಮ್ಮ ಹಳ್ಳಿ-ಕಡೆ ಯುವಕರು ಮದುವೆಯೇ ಆಗಬಾರದೆಂದು ಹೇಳುತ್ತಿಲ್ಲ. ಆದರೆ, ತಮಗೆ ವಧುಗಳಿಲ್ಲ ಎಂದು ಹೇಳುವ ಮೊದಲು, ಅವರಿಗೇನು ಬೇಕು ಎಂದು ಯಾಕೆ ನೋಡಬಾರದು?
ಅಡಿಕೆ ಬೆಳೆಯುವವರಿಗೆ, ನನಗೆ ತಿಳಿದಿರುವಂತೆ, ನಾಲ್ಕೈದು ತಿಂಗಳು ಮಾತ್ರ ಹೆಚ್ಚು ಕೆಲಸವಿರುತ್ತದೆ. ಉಳಿದ ಸಮಯವನ್ನು ಬೇರೆ constructive ಕೆಲಸಗಳಲ್ಲಿ - ಸಣ್ಣ ಉದ್ಯಮ, seasonal ಆದರೂ ಲಾಭದಾಯಕವಾದುದನ್ನು ಬೆಳೆಯುವುದು ಅಥವಾ ಅಂಥ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹ, ಇರುವುದರಲ್ಲೇ ಬೆಳೆಯನ್ನು maximize ಮಾಡುವುದು , ಓದು, ಬರವಣಿಗೆ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳಬಹುದು.
ಇಂದಿನ ಹೆಣ್ಣುಮಕ್ಕಳಿಗೆ , ಹಳ್ಳಿಯೋ ದಿಲ್ಲಿಯೋ ಎಂಬುದಕ್ಕಿಂತ ಮುಖ್ಯ ಹುಡುಗ ಎಷ್ಟು capable , ಹೊಸದೇನಾದರೂ ಇವನಲ್ಲಿದೆಯೇ, ಎಷ್ಟು methodical , ಏನನ್ನಾದರೂ ಸಾಧಿಸುವ ಛಲ, ಹಠ ಇದೆಯೇ, ಈಗಲ್ಲದಿದ್ದರೂ,ಮುಂದೊಂದು ದಿನ ಸಮಾಜದಲ್ಲಿ, ಗೌರವ, ಹೆಸರು ಗಳಿಸಬಲ್ಲವನೆ, ನಾವು ಒಬ್ಬರಿಗೊಬ್ಬರು ತಕ್ಕವರೇ, ಇಂಥವು ಮುಖ್ಯವಾಗುತ್ತವೆ .
ಇಂಥವರಿಗೂ ವಧು ಸಿಗದೇ ಹೋದರೆ, ಆಗ, ಲೇಖಕರ ದೃಷ್ಟಿ ಕೋನ ಸರಿ..
ಯೋಚಿಸಿ ನೋಡಿ..
PS : ಕನ್ನಡ ಬರವಣಿಗೆಗೆ ನಾನು ಹೊಸಬಳು. ತಪ್ಪುಗಳನ್ನು , ಕ್ಷಮಿಸಿ, ತಿದ್ದಿ .
ಬಹಳಷ್ಟು ಚರ್ಚೆ ಹಾಗು ಚಿಂತನೆಯನ್ನು ಬೇಡುವ ಸೂಕ್ಷ್ಮ ವಿಚಾರ. ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
ReplyDeleteಕನ್ನಡದಲ್ಲಿ ’ಚೆನ್ನಾಗಿಯೇ ’ ಬರೆಯುತ್ತೀರಿ. ಇದನ್ನು ಮುಂದುವರೆಸಿ ಎಂದು ಮನವಿ.
ReplyDeletesandeepa - charche maadOdappa athlaage.... :-)
ReplyDeleteಕೊರತೆ ಗೆ ಇನ್ನೂ ಸಾಕಷ್ಟು ಸೂಕ್ಶ್ಮ ಕಾರಣಗಳಿವೆ, ಅದನ್ನೂ ಚರ್ಚಿಸಿದ್ರೆ ಚೆನ್ನಿತ್ತು.
ReplyDelete@ Sandeepa: nimagoo dhanyavada..
ReplyDelete@ v.ra.he: dhanyavada! prayatnisuttene..
@neelihoovu: nija. Abhipraya tilisedenashte.